ಬಾಂಗ್ಲಾ: ಸಿಡಿಲಿಗೆ 22 ಮಂದಿ ಬಲಿ
ಢಾಕಾ (ಬಾಂಗ್ಲಾದೇಶ), ಜೂ. 20: ಬಾಂಗ್ಲಾದೇಶದಲ್ಲಿ ಕಳೆದ 48 ಗಂಟೆಗಳ ಅವಧಿಯಲ್ಲಿ ಸಿಡಿಲು ಬಡಿದು ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಮಳೆಯು ದೇಶದಲ್ಲಿ ಭೀಕರ ಸರಣಿ ಭೂಕುಸಿತಗಳನ್ನು ಸೃಷ್ಟಿಸಿದ ಒಂದು ವಾರದ ಬಳಿಕ ಈ ರೀತಿಯಲ್ಲಿ ಪ್ರಕೃತಿ ದಾಳಿ ನಡೆಸಿದೆ. ರವಿವಾರ ಮತ್ತು ಸೋಮವಾರ ಬಿರುಗಾಳಿಯ ಪ್ರಕೋಪವನ್ನು ದೇಶ ಎದುರಿಸಿದ ಬೆನ್ನಿಗೇ, ಸಿಡಿಲ ಆಘಾತಕ್ಕೆ ಜನರು ಬಲಿಯಾಗಿದ್ದಾರೆ. ದಂಪತಿ ಮತ್ತು ಹೆಣ್ಣು ಮಗುವೊಂದು ಸಿಡಿಲಿಗೆ ಬಲಿಯಾದವರಲ್ಲಿ ಸೇರಿದ್ದಾರೆ.
Next Story