ರಿಯಾಲಿಟಿ ಶೋನಲ್ಲಿ ವಾರ್ನ್ಗೆ ಕಚ್ಚಿದ ಅನಕೊಂಡಾ!
ಸಿಡ್ನಿ, ಫೆ.18: ಆಸ್ಟ್ರೇಲಿಯದ ಸ್ಪಿನ್ ಬೌಲಿಂಗ್ ಗ್ರೇಟ್ ಶೇನ್ ವಾರ್ನ್ಗೆ ಆಫ್ರಿಕದ ದೈತ್ಯ ಹಾವು ಅನಕೊಂಡ ಕಚ್ಚಿದೆ.
46 ಹರೆಯದ ವಾರ್ನ್ ಇಲ್ಲಿ ನಡೆದ ರಿಯಾಲಿಟಿ ಶೋನಲ್ಲಿ ಹಾವಿನಿಂದ ಮುಖಕ್ಕೆ ಕಚ್ಚಿಸಿಕೊಂಡಿದ್ದಾರೆ. ಮುಖಕ್ಕೆ ಗಾಯವಾಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ.
ನೆಟ್ ವರ್ಕ್ ಟೆನ್ ಶೋ ಆಯೋಜಿಸಿದ್ದ್ದ ‘ಐ ಆ್ಯಮ್ ಸೆಲೆಬ್ರಿಟಿ... ಗೆಟ್ ಮೀ ಔಟ್ ಆಫ್ ಹಿಯರ್’’ ರಿಯಾಲಿಟಿ ಶೋದಲ್ಲಿ ಶೇನ್ ವಾರ್ನ್ ಅಪಾಯಕಾರಿ ಹಾವಿನ ಜೊತೆ ಸರಸವಾಡಿ ಕಚ್ಚಿಸಿಕೊಂಡಿದ್ದಾರೆ.
ಅನಕೊಂಡ ಹಾವು ಸಾಧಾರಣವಾಗಿ ಸೂಜಿಯಂತೆ ಮೊಣಚಾದ 100 ಹಲ್ಲುಗಳನ್ನು ಹೊಂದಿವೆ. ಅದು ಬಾಯಿ ಹಾಕಿತೆಂದರೆ 100 ಸೂಜಿಗಳಿಂದ ಒಮ್ಮೆಲೇಚುಚ್ಚಿದ ಅನುಭವ ಆಗುತ್ತದೆ. ವಾರ್ನ್ ಅವರು ರಿಯಾಲಿಟಿ ಶೋದಲ್ಲಿ ಹಾವು ತುಂಬಿರುವ ಬಾಕ್ಸ್ಗೆ ತಲೆ ಹಾಕಿದರು. ಆಗ ಅನಕೊಂಡ ಅವರ ತಲೆಗೆ ಕಚ್ಚಿತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು ಎಂದು ನೆಟ್ವರ್ಕ್ ಟೆನ್ನ ವಕ್ತಾರ ಮಾಹಿತಿ ನೀಡಿದ್ದಾರೆ.
Next Story