ಸಾಲ ನೀಡದ ಬ್ಯಾಂಕ್ ವಿರುದ್ಧ ಈ ರೆಸ್ಟೋರೆಂಟ್ ಮಾಲಕ ಸೇಡು ತೀರಿಸಿದ್ದು ಹೀಗೆ !
ಪ್ಯಾರಿಸ್ , ಫ಼ೆ. 18 : ಇಲ್ಲಿನ ರೆಸ್ಟೋರೆಂಟ್ ಮಾಲಕನೊಬ್ಬ ತನಗೆ ಸಾಲ ನೀಡದ ಬ್ಯಾಂಕ್ ಮ್ಯಾನೇಜರ್ ಗಳ ಮೇಲೆ ಸೇಡು ತೀರಿಸಿದ್ದು ಹೇಗೆ ಗೊತ್ತೇ ? ಆತ ತನ್ನ ಎರಡನೆ ರೆಸ್ಟೋರೆಂಟ್ ತೆರೆಯಲು ಎಪ್ಪತ್ತು ಸಾವಿರ ಯೂರೋ (53 ಲಕ್ಷ ರೂಪಾಯಿ ) ಸಾಲ ಬೇಕಿತ್ತು. ಆದರೆ ಯಾವುದೇ ಬ್ಯಾಂಕ್ ನಲ್ಲಿ ಆತನಿಗೆ ಸಾಲ ಸಿಗಲಿಲ್ಲ. ಅದಕ್ಕೆ ತನ್ನ ರೆಸ್ಟೋರೆಂಟ್ ಹೊರಗೆ ಆತ ಒಂದು ಬೋರ್ಡ್ ಹಾಕಿ ಅದರಲ್ಲಿ " ನಾಯಿಗಳಿಗೆ ಪ್ರವೇಶವಿದೆ, ಆದರೆ ಬ್ಯಾಂಕರ್ ಗಳಿಗೆ ಇಲ್ಲ ( ಅವರು ಎಪ್ಪತ್ತು ಸಾವಿರ ಯೂರೋ ಪ್ರವೇಶ ಫೀ ನೀಡಬೇಕು) " ಎಂದು ಬರೆದು ಬಿಟ್ಟಿದ್ದಾನೆ.
ಪ್ರತಿಷ್ಠಿತ ಮಿಚೆಲಿನ್ ಗೈಡ್ ನಲ್ಲಿ ಹೆಸರಿಸಿರುವ ಈತನ ರೆಸ್ಟೋರೆಂಟ್ ಕಳೆದ ವರ್ಷ ಮೂರು ಲಕ್ಷ ಯೂರೋ ಆದಾಯ ಗಳಿಸಿತ್ತು. ಆದರೆ ಎರಡನೇ ರೆಸ್ಟೋರೆಂಟ್ ಮಾಡಲು ಯಾವುದೇ ಬ್ಯಾಂಕ್ ಆತನಿಗೆ ಸಾಲ ನೀಡಲಿಲ್ಲ. ಇದಕ್ಕಾಗಿ ಆಟ ಫ್ರೆಂಚ್ ಸರಕಾರವನ್ನೂ ಟೀಕಿಸಿದ್ದಾನೆ.
ಈತ ಈ ಹಿಂದೆ ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದ.
Next Story