ಚೀನಾ: ಅನಿಲ ಪೈಪ್ಲೈನ್ ಸ್ಫೋಟ; 8 ಸಾವು
ಬೀಜಿಂಗ್, ಜು. 3: ನೈರುತ್ಯ ಚೀನಾದಲ್ಲಿ ರವಿವಾರ ನೈಸರ್ಗಿಕ ಅನಿಲ ಪೈಪ್ಲೈನ್ ಸ್ಫೋಟಗೊಂಡಿದ್ದು, ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಕ್ಸಿನುವ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದಾಗಿ ಗುಯಿಝು ಪ್ರಾಂತದ ಶಾಝಿ ಪಟ್ಟಣದಲ್ಲಿ ಹಾದು ಹೋಗುವ ಪೈಪ್ಲೈನ್ನಲ್ಲಿ ಸೋರಿಕೆಯುಂಟಾಗಿತ್ತು.
Next Story