ಈಜಿಪ್ಟ್: 26 ಸೈನಿಕರ ಹತ್ಯೆ
ಕೈರೋ, ಜು. 7: ಸಿನೈ ಪರ್ಯಾಯ ದ್ವೀಪದಲ್ಲಿರುವ ಚೆಕ್ಪಾಯಿಂಟ್ಗಳ ಮೇಲೆ ಐಸಿಸ್ ಭಯೋತ್ಪಾದಕರು ಶುಕ್ರವಾರ ನಡೆಸಿದ ದಾಳಿಗಳಲ್ಲಿ 26 ಈಜಿಪ್ಟ್ ಸೈನಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಸಿನೈ ದ್ವೀಪದಲ್ಲಿ ಐಸಿಸ್ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದೆ.
ಅದೇ ವೇಳೆ, ಉತ್ತರ ಸಿನೈಯಲ್ಲಿ ಭಯೋತ್ಪಾದಕರ ವಿರುದ್ಧ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಉಗ್ರರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
Next Story