ಭಾರತಕ್ಕೆ ಪಾಕ್ ರಾಯಭಾರಿ ಅವಧಿಪೂರ್ವ ನಿವೃತ್ತಿ
ಇಸ್ಲಾಮಾಬಾದ್, ಜು. 25: ವಿದೇಶ ಸೇವೆಯಿಂದ ತನ್ನನ್ನು ಅವಧಿಪೂರ್ವ ನಿವೃತ್ತಿಗೊಳಿಸುವಂತೆ ಕೋರಿ ಭಾರತಕ್ಕೆ ಪಾಕಿಸ್ತಾನದ ಹೈಕಮಿಶನರ್ ಅಬ್ದುಲ್ ಬಸಿತ್ ಮಾಡಿರುವ ಮನವಿಯನ್ನು ಪಾಕಿಸ್ತಾನ ಸರಕಾರ ಅಂಗೀಕರಿಸಿದೆ.ಈ ವರ್ಷದ ಆರಂಭದಲ್ಲಿ ವಿದೇಶ ಕಾರ್ಯದರ್ಶಿ ಹುದ್ದೆ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ನಿರಾಶರಾಗಿದ್ದರು.2018ರ ಎಪ್ರಿಲ್ನಲ್ಲಿ ನಿವೃತ್ತಿಯಾಗಬೇಕಿದ್ದರೂ, ಅವರು ಇತ್ತೀಚೆಗೆ ತನ್ನ ರಾಜೀನಾಮೆ ಪತ್ರವನ್ನು ಪ್ರಧಾನಿ ನವಾಝ್ ಶರೀಫ್ರಿಗೆ ಕಳುಹಿಸಿಕೊಟ್ಟಿದ್ದರು. ರಾಜೀನಾಮೆಯನ್ನು ಶರೀಫ್ ಮಂಗಳವಾರ ಅಂಗೀಕರಿಸಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.ಪ್ರಸ್ತುತ ಟರ್ಕಿ ರಾಯಭಾರಿಯಾಗಿರುವ ಸುಹೈಲ್ ಮುಹಮ್ಮದ್ರನ್ನು ಭಾರತಕ್ಕೆ ಮುಂದಿನ ಹೈಕಮಿಶನರ್ ಎಂಬುದಾಗಿ ಈಗಾಗಲೇ ಹೆಸರಿಸಲಾಗಿದೆ. 55 ವರ್ಷದ ಮುಹಮ್ಮದ್ ಮುಂದಿನ ತಿಂಗಳು ಹೊಸದಿಲ್ಲಿಯಲ್ಲಿ ಅಧಿಕಾರ ಸ್ವೀಕರಿಸುವ ನಿರೀಕ್ಷೆ ಇದೆ.
Next Story