ಚೀನಾದಿಂದ ‘ಬಲಪ್ರಯೋಗ ತಂತ್ರ’: ಸಿಐಎ ಆರೋಪ
ವಾಶಿಂಗ್ಟನ್, ಜು. 25: ಏಶ್ಯ-ಪೆಸಿಫಿಕ್ ವಲಯದಲ್ಲಿ ತನ್ನ ಗುರಿಗಳನ್ನು ಸಾಧಿಸಿಕೊಳ್ಳಲು ಚೀನಾ ದಿನೇ ದಿನೇ ‘ಬಲಪ್ರಯೋಗ ತಂತ್ರ’ಗಳನ್ನು ಅನುಸರಿಸುತ್ತಿದೆ ಹಾಗೂ ಇದು ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಸಾಬೀತಾಗಿದೆ ಎಂದು ಅಮೆರಿಕದ ಬಾಹ್ಯ ಗುಪ್ತಚರ ಸಂಸ್ಥೆ ಸಿಐಎಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೂರ್ವ ಚೀನಾ ಸಮುದ್ರದಲ್ಲಿರುವ ಹಲವು ದ್ವೀಪಗಳು ತಮ್ಮದೆಂದು ಚೀನಾ ಮತ್ತು ಜಪಾನ್ಗಳು ಹೇಳಿಕೊಳ್ಳುತ್ತಿವೆ. ಜಪಾನ್ ತನ್ನದೆಂದು ಹೇಳಿಕೊಳ್ಳುವ ಸೆಂಕಾಕು ದ್ವೀಪ ಸಮೂಹಗಳಿಗೆ ಸಂಬಂಧಿಸಿ ಈ ಎರಡು ದೇಶಗಳ ನಡುವೆ ಹಲವು ಬಾರಿ ಉದ್ವಿಗ್ನತೆ ತಲೆದೋರಿದೆ. ಇದು ತನ್ನ ‘ಡಿಯಾವೊಯು’ ದ್ವೀಪಗಳೆಂದು ಚೀನಾ ಹೇಳಿಕೊಳ್ಳುತ್ತಿದೆ.
Next Story