ನಮ್ಮ ವಸ್ತುಗಳ ತನಿಖೆ ನಿಲ್ಲಿಸಿ: ಭಾರತಕ್ಕೆ ಚೀನಾ ಎಚ್ಚರಿಕೆ
ಬೀಜಿಂಗ್, ಜು. 26: ಚೀನಾದಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಕುರಿತ ತನಿಖೆಗಳನ್ನು ನಿಲ್ಲಿಸುವಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಭಾರತ ಮತ್ತು ಚೀನಾಗಳ ನಡುವಿನ ವ್ಯಾಪಾರ ವಿವಾದಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು, ತನಿಖೆಗಳ ಮೂಲಕವಲ್ಲ ಎಂದು ಚೀನಾದ ವಾಣಿಜ್ಯ ಸಚಿವಾಲಯ ಹೇಳಿದೆ.
ಚೀನಾ, ತೈವಾನ್ ಮತ್ತು ಮಲೇಶ್ಯಗಳಿಂದ ಆಮದು ಮಾಡಿಕೊಳ್ಳುವ ಫೋಟೊವೋಲ್ಟಾಯಿಕ್ ಸೆಲ್ಗಳು ಮತ್ತು ಯೂನಿಟ್ಗಳ ಬಗ್ಗೆ ‘ಆ್ಯಂಟಿ-ಡಂಪಿಂಗ್’ ತನಿಖೆಯನ್ನು ಆರಂಭಿಸುವುದಾಗಿ ಭಾರತ ಜುಲೈ 21ರಂದು ಘೋಷಿಸಿದ ಹಿನ್ನೆಲೆಯಲ್ಲಿ ಚೀನಾ ಈ ಪ್ರತಿಕ್ರಿಯೆ ನೀಡಿದೆ.
Next Story