ಅಫ್ಘಾನ್: ತಾಲಿಬಾನ್, ಐಸಿಸ್ನಿಂದ 50 ನಾಗರಿಕರ ಹತ್ಯೆ
ಕಾಬೂಲ್, ಆ. 7: ಅಫ್ಘಾನಿಸ್ತಾನದ ಗ್ರಾಮವೊಂದರಲ್ಲಿ ತಾಲಿಬಾನ್ ಮತ್ತು ಐಸಿಸ್ ಭಯೋತ್ಪಾದಕ ಗುಂಪುಗಳು ಜೊತೆಯಾಗಿ ಡಝನ್ಗಟ್ಟಳೆ ನಾಗರಿಕರನ್ನು ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಭಯೋತ್ಪಾದಕ ಗುಂಪುಗಳು ಜಂಟಿ ಕಾರ್ಯಾಚರಣೆ ನಡೆಸಿರುವುದು ದೇಶದ ಭದ್ರತಾ ಪಡೆಗಳ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.
ಸಾರೆ ಪುಲ್ ಪ್ರಾಂತದ ದುರ್ಗಮ ಸಯ್ಯದ್ ಜಿಲ್ಲೆಯಲ್ಲಿ ಸರಕಾರಿ ಬೆಂಬಲಿತ ಹೋರಾಟ ಪಡೆಯಾಗಿರುವ ಅಫ್ಘಾನ್ ಲೋಕಲ್ ಪೊಲೀಸನ್ನು 48 ಗಂಟೆಗಳ ಕಾಳಗದಲ್ಲಿ ಸೋಲಿಸಿದ ಬಳಿಕ, ಭಯೋತ್ಪಾದಕರು 50ಕ್ಕೂ ಅಧಿಕ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಕೊಂದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.
Next Story