ಸುಶ್ಮಾ ಸ್ವರಾಜ್ ನೇಪಾಳಕ್ಕೆ 2 ದಿನಗಳ ಭೇಟಿ
ಕಾರ್ಯಸೂಚಿಯಲ್ಲಿ ‘ಬಿಮ್ಸ್ಟೆಕ್’ ಸಭೆ
ಕಠ್ಮಂಡು, ಆ. 10: ಎರಡು ದಿನಗಳ ಭೇಟಿಗಾಗಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಗುರುವಾರ ನೇಪಾಳಕ್ಕೆ ಆಗಮಿಸಿದ್ದಾರೆ. ಈ ಪ್ರವಾಸದ ವೇಳೆ ಅವರು ‘ಬಿಮ್ಸ್ಟೆಕ್’ ಸಚಿವ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನೇಪಾಳ ಪ್ರಧಾನಿ ಶೇರ್ ಬಹಾದುರ್ ದೇವುಬ ಭಾರತ ಪ್ರವಾಸ ಕೈಗೊಳ್ಳಲಿರುವ ಕೆಲವೇ ದಿನಗಳ ಮೊದಲು ಸುಶ್ಮಾ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ದೇವುಬ ಆಗಸ್ಟ್ 23ರಂದು ತನ್ನ ಭಾರತ ಪ್ರವಾಸವನ್ನು ಆರಂಭಿಸಲಿದ್ದಾರೆ.
‘ಬಿಮ್ಸ್ಟೆಕ್’ ಸಮ್ಮೇಳನದಲ್ಲಿ ಭಾಗವಹಿಸುವುದರ ಜೊತೆಗೆ, ಸುಶ್ಮಾ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ಪ್ರಧಾನಿ ದೇವುಬ, ಪ್ರತಿಪಕ್ಷ ನಾಯಕ ಕೆ.ಪಿ. ಒಲಿ, ಸಿಪಿಎನ್-ಮೋವೊವಾದಿ ಸೆಂಟರ್ ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಮದೇಸ್ನ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ.
Next Story