ನವಾಝ್ ಷರೀಫ್ಗೆ ಹೈಕೋರ್ಟ್ ನೋಟಿಸ್
ಇಸ್ಲಮಾಬಾದ್, ಆ.15: ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅಪಮಾನ ಮಾಡಿದ ಆರೋಪದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್ ಹಾಗೂ ಹಾಲಿ ಸಚಿವರಿಗೆ ಲಾಹೋರ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು ಆಗಸ್ಟ್ 25ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.
ಪನಾಮಾ ಪೇಪರ್ ಹಗರಣದಲ್ಲಿ ಕೋರ್ಟ್ ಸೂಚನೆಯಂತೆ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಷರೀಫ್ ಕಳೆದ ವಾರ ಇಸ್ಲಮಾಬಾದ್ನಿಂದ ಲಾಹೋರ್ಗೆ ನಡೆಸಿದ್ದ ‘ಮರಳಿ ಮನೆಗೆ’ ರ್ಯಾಲಿಯ ಸಂದರ್ಭ ಸುಪ್ರೀಂಕೋರ್ಟ್ನ ಐವರು ನ್ಯಾಯಾಧೀಶರನ್ನು ಅವಹೇಳನ ಮಾಡಿದ್ದರು ಎಂದು ಅರ್ಜಿದಾರರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
Next Story