ಫೋರಿಡ: ಪೊಲೀಸರ ಮೇಲೆ ದಾಳಿ; ಓರ್ವ ಸಾವು
ಫ್ಲೋರಿಡ (ಅಮೆರಿಕ), ಆ. 19: ಫೋರಿಡದ ಎರಡು ನಗರಗಳಲ್ಲಿ ಶುಕ್ರವಾರ ರಾತ್ರಿ ಪೊಲೀಸರ ಮೇಲೆ ನಡೆದ ದಾಳಿಗಳಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಮಾದಕ ದ್ರವ್ಯ ಚಟುವಟಿಕೆಗಳು ಹಾಗೂ ಆತ್ಮಹತ್ಯಾ ಯತ್ನಗಳಿಗೆ ಸಂಬಂಧಿಸಿದ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ.
ಮಧ್ಯ ಫ್ಲೋರಿಡದ ಕಿಸಿಮ್ಮೀ ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಸಂಘರ್ಷದಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟರು ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡರು.
ಬಳಿಕ ಜಾಕ್ಸನ್ವಿಲ್ನಲ್ಲಿ ನಡೆದ ಘರ್ಷಣೆಯಲ್ಲಿ ಇತರ ಇಬ್ಬರು ಪೊಲೀಸರು ಗಾಯಗೊಂಡರು.
ಓರ್ವ ಶಂಕಿತನನ್ನು ಪ್ರತಿ ದಾಳಿ ನಡೆಸಿ ಕೊಲ್ಲಲಾಗಿದೆ ಹಾಗೂ ಮೂವರು ಶಂಕಿತರನ್ನು ಬಂಧಿಸಲಾಗಿದೆ.
Next Story