ಹಡಗುಗಳ ಢಿಕ್ಕಿ: ಅಮೆರಿಕದ 10 ನೌಕಾ ಸೈನಿಕರು ನಾಪತ್ತೆ
ಸಿಂಗಾಪುರ, ಆ. 21: ಸಿಂಗಾಪುರ ಕರಾವಳಿಯಲ್ಲಿ ಸೋಮವಾರ ಅಮೆರಿಕದ ಯುದ್ಧ ನೌಕೆಯೊಂದು ಟ್ಯಾಂಕರ್ ಹಡಗೊಂದಕ್ಕೆ ಢಿಕ್ಕಿ ಹೊಡೆದ ಬಳಿಕ 10 ಮಂದಿ ನಾವಿಕರು ನಾಪತ್ತೆಯಾಗಿದ್ದಾರೆ.
ಸೋಮವಾರ ಮುಂಜಾನೆ ಮಲಕ್ಕ ಜಲಸಂಧಿಯ ಸಮೀಪ ಅಮೆರಿಕದ ಯುದ್ಧ ನೌಕೆ ಯುಎಸ್ಎಸ್ ಜಾನ್ ಎಸ್. ಮೆಕೇನ್ ವಾಣಿಜ್ಯ ಹಡಗು ಆಲ್ನಿಕ್ ಎಂಸಿಗೆ ಢಿಕ್ಕಿ ಹೊಡೆಯಿತು ಎಂದು ಅಮೆರಿಕದ ನೌಕಾಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story