ಬ್ರಿಟನ್ನಿಂದ ದಾವೂದ್ನ 21 ಹೆಸರುಗಳ ಬಿಡುಗಡೆ
ಲಂಡನ್, ಆ. 22: ಭೂಗತ ಪಾತಕಿ ದಾವೂದ್ ಇಬ್ರಾಹೀಮ್ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳನ್ನು ಮುಂದುವರಿಸುವುದಾಗಿ ಬ್ರಿಟನ್ ಸೋಮವಾರ ಪ್ರಕಟಿಸಿದೆ.
1993ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪಾತಕ ಮತ್ತು ಭಯೋತ್ಪಾದನೆ ಕೃತ್ಯಗಳಲ್ಲಿ ಆತ ಶಾಮೀಲಾಗಿದ್ದಾನೆ.
ಅದೇ ವೇಳೆ, ಆತ ಹೊಂದಿರುವ 21 ವಿವಿಧ ಹೆಸರುಗಳ ಪಟ್ಟಿಯನ್ನೂ ಬ್ರಿಟನ್ ಹೊರಡಿಸಿದೆ.
ಪಟ್ಟಿಯ ಕೆಲವು ಹೆಸರುಗಳು ಹೀಗಿವೆ: ಅಬ್ದುಲ್ ಶೇಖ್ ಇಸ್ಮಾಯೀಲ್, ಅಬ್ದುಲ್ ಅಝೀಝ್, ಅಬ್ದುಲ್ ಹಮೀದ್, ಅಬ್ದುಲ್ ರಹಮಾನ್, ಮುಹಮ್ಮದ್ ಶೇಖ್ ಇಸ್ಮಾಯೀಲ್, ಅನೀಸ್ ಇಬ್ರಾಹೀಮ್, ಶೇಖ್ ಮುಹಮ್ಮದ್, ಬಡಾ ಭಾಯಿ, ದಾವೂದ್ ಭಾಯಿ, ಇಕ್ಬಾಲ್ ಭಾಯಿ ದಿಲೀಪ್ ಅಝೀಝ್, ದಾವೂದ್ ಇಬ್ರಾಹೀಮ್ ಮುಂತಾದವು.
Next Story