ಸಿರಿಯ: ಅಮೆರಿಕ ವಾಯು ದಾಳಿ: 42 ನಾಗರಿಕರ ಸಾವು
ಬೆರೂತ್, ಆ. 22: ಸಿರಿಯದ ರಖ ನಗರದಲ್ಲಿ ಐಸಿಸ್ ಹೊಂದಿರುವ ನೆಲೆಗಳ ಮೇಲೆ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಸೋಮವಾರ ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ 42 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಮಂಗಳವಾರ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಉತ್ತರದ ನಗರದ ಹಲವಾರು ಉಪನಗರಗಳ ಮೇಲೆ ನಡೆದ ದಾಳಿಗಳಲ್ಲಿ 19 ಮಕ್ಕಳು ಮತ್ತು 12 ಮಹಿಳೆಯರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅದು ಹೇಳಿದೆ.
Next Story