ಇಂಗ್ಲೆಂಡ್ ನಲ್ಲಿ ರಸ್ತೆ ಅಪಘಾತ; ಭಾರತದ 8 ಮಂದಿ ಸಾವು
ಲಂಡನ್, ಆ.27: ಮಿನಿ ಬಸ್ಸೊಂದು ಎರಡು ಟ್ರಕ್ ಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಿನಿ ಬಸ್ ನಲ್ಲಿದ್ದ ಭಾರತದ 8 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಶೈರ್ ನ ನ್ಯೂಪೋರ್ಟ್ ಪಾಗ್ನೆಲ್ ನಲ್ಲಿ ಶನಿವಾರ ನಡೆದಿದೆ.
ಇಂಗ್ಲೆಂಡ್ ನಲ್ಲಿರುವ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಭಾರತದಿಂದ ತೆರಳಿದ್ದ ಇವರು ಕುಟುಂಬದ ಜೊತೆ ರಜೆಯಲ್ಲಿ ಸ್ಥಳೀಯ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತಪಟ್ಟವರ ಪೈಕಿ ಮಿನಿ ಬಸ್ ನ ಚಾಲಕ ಭಾರತ ಮೂಲದ ಸಿರಿಯಾಕ್ ಜೋಸೆಫ್ ಎಂಬವರ ಗುರುತು ಪತ್ತೆಯಾಗಿದೆ. ಉಳಿದವರ ವಿವರ ಲಭ್ಯವಾಗಿಲ್ಲ. ದುರ್ಘಟನೆಯಲ್ಲಿ 4 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿ ಎರಡು ಟ್ರಕ್ ಗಳ ಚಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story