ಸೂ ಕಿಯನ್ನು ಟೀಕಿಸಿದ ದಕ್ಷಿಣ ಆಫ್ರಿಕದ ಆರ್ಚ್ಬಿಶಪ್ ಡೆಸ್ಮಂಡ್ ಟೂಟು
ಜೊಹಾನ್ಸ್ಬರ್ಗ್, ಸೆ. 8: ರೊಹಿಂಗ್ಯ ಮುಸ್ಲಿಮರನ್ನು ಮ್ಯಾನ್ಮಾರ್ ಸರಕಾರ ನಡೆಸಿಕೊಳ್ಳುತ್ತಿರುವ ರೀತಿಗಾಗಿ ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿಯನ್ನು ದಕ್ಷಿಣ ಆಫ್ರಿಕದ ಆರ್ಚ್ಬಿಶಪ್ ಡೆಸ್ಮಂಡ್ ಟೂಟು ಗುರುವಾರ ಟೀಕಿಸಿದ್ದಾರೆ ಹಾಗೂ ಈ ಬಿಕ್ಕಟ್ಟು ಶಮನಗೊಳಿಸಲು ಮಧ್ಯಪ್ರವೇಶಿಸುವಂತೆ ಅವರನ್ನು ಒತ್ತಾಯಿಸಿದ್ದಾರೆ.
‘‘ಮ್ಯಾನ್ಮಾರ್ನ ಅತ್ಯುನ್ನತ ಹುದ್ದೆಗೆ ನೀವು ಏರಿದ್ದೀರಿ. ಅದರ ರಾಜಕೀಯ ಬೆಲೆ ನಿಮ್ಮ ವೌನವಾದರೆ, ಬೆಲೆ ತುಂಬಾ ದುಬಾರಿಯಾಯಿತು’’ ಎಂದು ಟೂಟು ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.
ದೌರ್ಜನ್ಯಕ್ಕೆ ಒಳಗಾಗುತ್ತಿರುವ ರೊಹಿಂಗ್ಯ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವಂತೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂ ಕಿ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ.
Next Story