ಟ್ರಂಪ್ ಸ್ತ್ರೀಲಂಪಟ ವೀಡಿಯೊ ಬಹಿರಂಗ!
ರಾಜಕುಮಾರಿ ಡಯಾನರ ವಿರುದ್ಧ ಅಶ್ಲೀಲ ವಿಶ್ಲೇಷಣೆ!
ಅಮೆರಿಕ,ಫೆ29: ವಲಸೆಗಾರರು ಮತ್ತು ಮುಸ್ಲಿಮರ ವಿರುದ್ಧ ಅತಿಶಯೋಕ್ತವಾದ ನಿಲುವು ಹೊಂದಿರುವ ಮತ್ತು ಅಮೆರಿಕನ್ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಲು ನಾಗಲೋಟದಲ್ಲಿರುವ ಡೊನಾಲ್ಡ್ ಟ್ರಂಪ್ ತನ್ನ ಕೀಳು ಅಭಿರುಚಿಯನ್ನು ಅಲ್ಲಿಗೆ ನಿಲ್ಲಿಸಿಲ್ಲ. ಜಗತ್ತಿನ ಅತಿದೊಡ್ಡ ಸ್ತ್ರೀಲಂಪಟ ಮತ್ತು ಮಹಿಳೆಯರನ್ನು ಕೇವಲ ಲೈಂಗಿಕ ಉಪಕರಣವಾಗಿ ಬಳಸುವವರೆಂದು ಸಾಬೀತು ಪಡಿಸುವ ವೀಡಿಯೊಗಳು ಹೊರಬಂದಿವೆ. ಅಧ್ಯಕ್ಷನಾಗಿ ಅಮೆರಿಕವನ್ನು ರಕ್ಷಿಸಲು ಹೊರಟ ವ್ಯಕ್ತಿ ಈ ವಿಷಯದಲ್ಲಿ ಮಾಜಿ ಅಧ್ಯಕ್ಷ ಬಿಲ್ಕ್ಲಿಂಟನ್ನರನ್ನು ಹಿಂದಿಕ್ಕುವರೆಂದು ಈಗ ಪ್ರಚಾರವಾಗುತ್ತಿದೆ.
1990ರಲ್ಲಿ ಡಿಜೆ ಹೋವಾರ್ಡ್ ಸ್ಟೋನ್ರ ಟಿವಿ ಶೋದಲ್ಲಿ ಖಾಯಂ ಅತಿಥಿಯಾಗಿದ್ದ ಟ್ರಂಪ್ ನೀಡಿದ ವಿಶ್ಲೇಷಣೆಗಳು ಈಗ ವಿವಾದಕ್ಕೆಡೆಯಾಗಿದೆ. ಬ್ರಿಟನ್ ರಾಜಕುಮಾರಿ ಡಯಾನ್ರಿಗೆ ಹುಚ್ಚೆಂದು ಆದರೂ ಡಯಾನರೊಡನೆ ಹಾಸಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆಂದೂ ಸ್ಟೋನ್ರೊಂದಿಗೆ ಟ್ರಂಪ್ ಹೇಳಿರುವುದು ಈಗ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಡಯಾನ ಮೃತರಾದುದಕ್ಕೆ ನಿಕಟವಾಗಿ ನಡೆದಿದ್ದ ಶೋನಲ್ಲಿ ಒಬ್ಬಳು ಸೂಪರ್ಮಾಡೆಲ್ಗೆ ಡಯಾನರನ್ನು ಹೋಲಿಸುತ್ತಾ ಹೀಗೆ ಟ್ರಂಪ್ ಹೇಳಿದ್ದಾರೆ.
2000ಇಸವಿಯಲ್ಲಿ ಚಿತ್ರೀಕರಿಸಿದ ಇನ್ನೊಂದು ಎಪಿಸೋಡ್ನಲ್ಲಿಯೂ ರಾಜಕುಮಾರಿ ಡಯಾನರ ಕುರಿತು ಟ್ರಂಪ್ ಅಶ್ಲೀಲ ಪರಾಮರ್ಶೆ ನಡೆಸಿದ ವೀಡಿಯೊವೀಗ ಸಾರ್ವಜನಿಕವಾಗಿ ಬಹಿರಂಗವಾಗಿದ್ದು ಟ್ರಂಪ್ರ ನೈತಿಕತೆಯನ್ನು ಜಾಲಾಡಿದೆ. ಈ ಕುರಿತು ಸಾರ್ವಜನಿಕರೆಡೆಯಲ್ಲಿ ವ್ಯಾಪಕ ಆಕ್ರೋಶ ಸೃಷ್ಟಿಯಾಗುತ್ತಿದೆ ಎಂದು ವರದಿಯಾಗಿದೆ.