ರೋಹಿಂಗ್ಯನ್ನರ ಮೇಲೆ ಮ್ಯಾನ್ಮಾರ್ ದೌರ್ಜನ್ಯ: ಏಶ್ಯದ ವಿವಿಧೆಡೆ ಪ್ರತಿಭಟನೆ
ಢಾಕಾ,ಸೆ.9: ಮ್ಯಾನ್ಮಾರ್ನಲ್ಲಿ ಅಲ್ಪಸಂಖ್ಯಾತ ರೋಹಿಂಗ್ಯ ಮುಸ್ಲಿಮರ ಹತ್ಯಾಕಾಂಡ ವನ್ನು ಖಂಡಿಸಿ ಬಾಂಗ್ಲಾ, ಮಲೇಶ್ಯ ಸೇರಿದಂತೆ ಏಶ್ಯದ ವಿವಿಧೆಡೆ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ರೋಹಿಂಗ್ಯನ್ನರ ಹತ್ಯಾಕಾಂಡ ಕೊನೆಗೊಳ್ಳಬೇಕು ಹಾಗೂ ಜೀವಭಯದಿಂದ ಬೇರೆ ದೇಶಗಳಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯನ್ನರನ್ನು ಮರಳಿ ಕರೆಸಿಕೊಳ್ಳಬೇಕೆಂದು ಮ್ಯಾನ್ಮಾರ್ ಸರಕಾರವನ್ನು ಆಗ್ರಹಿಸಿ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಶುಕ್ರವಾರ ರಾಜಕೀಯ ಹಾಗೂ ಧಾರ್ಮಿಕ ಸಂಘಟನೆಗಳು, ಮಾನವಹಕ್ಕು ಸಂಸ್ಥೆಗಳು ಬೃಹತ್ ರ್ಯಾಲಿ ನಡೆಸಿದವು.
Next Story