‘ಇರ್ಮಾ’ ಚಂಡಮಾರುತ; ಫ್ಲೋರಿಡದಲ್ಲಿ 12 ಸಾವು
ಮಯಾಮಿ (ಅಮೆರಿಕ), ಸೆ. 13: ‘ಇರ್ಮಾ’ ಚಂಡಮಾರುತದಿಂದಾಗಿ ಅಮೆರಿಕದ ಫ್ಲೋರಿಡ ರಾಜ್ಯದಲ್ಲಿ ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಚಂಡಮಾರುತವು ರವಿವಾರ ಫ್ಲೋರಿಡದ ಕೀ ದ್ವೀಪ ಸಮೂಹ ಮತ್ತು ಒಳನಾಡಿನ ಮೂಲಕ ಹಾದು ಹೋಗಿತ್ತು.
‘‘ಈಗಿನ ಮಟ್ಟಿಗೆ, ‘ಇರ್ಮಾ’ ಚಂಡಮಾರುತದಿಂದ ಸಾವನ್ನಪ್ಪಿದವರೆಂದು ಹೇಳಬಹುದಾದ ಜನರ ಸಂಖ್ಯೆ 12’’ ಎಂದು ಫ್ಲೋರಿಡದ ತುರ್ತು ನಿರ್ವಹಣೆ ಇಲಾಖೆಯ ವಕ್ತಾರ ಆಲ್ಬರ್ಟೊ ಮೊಸ್ಕೊಸೊ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
Next Story