ಮೆಲ್ಬರ್ನ್: ಪೇಟಧಾರಿ ಸಿಖ್ ಮಗುವಿಗೆ ಪ್ರವೇಶ ನೀಡಲು ನ್ಯಾಯಾಲಯ ಆದೇಶ
ಮೆಲ್ಬರ್ನ್, ಸೆ. 19: ಪೇಟ ಧರಿಸುವ ಕಾರಣಕ್ಕಾಗಿ ತಮ್ಮ ಐದು ವರ್ಷದ ಮಗನಿಗೆ ಪ್ರವೇಶ ನಿರಾಕರಿಸಿದ ಕ್ರೈಸ್ತ ಶಾಲೆಯೊಂದರ ವಿರುದ್ಧ ಮೊಕದ್ದಮೆ ದಾಖಲಿಸಿರುವ ಆಸ್ಟ್ರೇಲಿಯದ ಸಿಖ್ ಕುಟುಂಬವೊಂದಕ್ಕೆ ಜಯ ಸಿಕ್ಕಿದೆ.
ಶಾಲೆಯಲ್ಲಿ ಯಾವುದೇ ರೀತಿಯ ಧಾರ್ಮಿಕ ವಸ್ತ್ರಗಳನ್ನು ಬಳಸುವಂತಿಲ್ಲ ಎಂದು, ಸಿದಕ್ ಸಿಂಗ್ ಅರೋರಾಗೆ ಮೇಲ್ಬರ್ನ್ ಶಾಲೆಯು ಪ್ರವೇಶ ನಿರಾಕರಿಸಿತ್ತು.
ಶಾಲೆಯು ಸಮಾನ ಅವಕಾಶ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಸಾಗರ್ದೀಪ್ ಸಿಂಗ್ ಅರೊರೊ ಮತ್ತು ಅವರ ಪತ್ನಿ ಅನುರೀತ್ ನ್ಯಾಯಾಲಯದ ಮೆಟ್ಟಿಲೇರಿದ್ದರು
ವಿಕ್ಟೋರಿಯದ ಸಿವಿಲ್ ಮತ್ತು ಆಡಳಿತಾತ್ಮಕ ನ್ಯಾಯಮಂಡಳಿಯು ಮಗುವಿನ ಹೆತ್ತವರ ಪರವಾಗಿ ತೀರ್ಪು ನೀಡಿದೆ.
Next Story