ಇರಾನ್ ಕ್ಷಿಪಣಿಗೆ ಇಸ್ರೇಲ್ ತಲುಪುವ ಸಾಮರ್ಥ್ಯ: ಟ್ರಂಪ್
ವಾಶಿಂಗ್ಟನ್, ಸೆ. 24: ಇರಾನ್ ಇತ್ತೀಚೆಗೆ ಯಶಸ್ವಿಯಾಗಿ ಪರೀಕ್ಷಿಸಿದ ನೂತನ ಪ್ರಕ್ಷೇಪಕ ಕ್ಷಿಪಣಿಯು ಇಸ್ರೇಲ್ ತಲುಪುವ ಸಾಮರ್ಥ್ಯ ಹೊಂದಿರಬಹುದಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
‘‘ಇಸ್ರೇಲನ್ನು ತಲುಪುವ ಸಾಮರ್ಥ್ಯವುಳ್ಳ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಇರಾನ್ ಈಗಷ್ಟೇ ಪರೀಕ್ಷೆ ಮಾಡಿದೆ. ಅವರು ಉತ್ತರ ಕೊರಿಯದ ಜೊತೆಗೂ ಸಹಕಾರ ಹೊಂದಿದ್ದಾರೆ’’ ಎಂದು ಟ್ರಂಪ್ ಶನಿವಾರ ಟ್ವೀಟ್ ಮಾಡಿದ್ದಾರೆ.
Next Story