ಸಿರಿಯ: ರಶ್ಯ ವಾಯು ದಾಳಿಯಲ್ಲಿ 45 ಬಂಡುಕೋರರ ಸಾವು
ಬೆರೂತ್, ಸೆ. 25: ವಾಯುವ್ಯ ಸಿರಿಯದ ರಾಜ್ಯ ಇದ್ಲಿಬ್ನಲ್ಲಿ ರಶ್ಯ ನಡೆಸಿದ ವಾಯು ದಾಳಿಯಲ್ಲಿ ಬಂಡುಕೋರ ಗುಂಪೊಂದರ 45 ಹೋರಾಟಗಾರರು ಹತರಾಗಿದ್ದಾರೆ ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಈ ಗುಂಪು ರಶ್ಯ ಉಸ್ತುವಾರಿಯಲ್ಲಿ ಕಝಕ್ ರಾಜಧಾನಿ ಅಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಭಾಗವಹಸಿದ್ದವು. ಹಾಗಾಗಿ, ರಶ್ಯ ಈ ಗುಂಪಿನ ಮೇಲೆ ಯಾಕೆ ದಾಳಿ ನಡೆಸಿತು ಎನ್ನುವುದು ಸ್ಪಷ್ಟವಾಗಿಲ್ಲ.
ಆರಂಭದಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಬಳಿಕ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಯಿತು ಎಂದು ವೀಕ್ಷಣಾಲಯ ತಿಳಿಸದೆ.
Next Story