ಶ್ವೇತಭವನದಲ್ಲಿ ದೀಪಾವಳಿ ಆಚರಣೆ: ಟ್ರಂಪ್ ಸೇರಿದಂತೆ ಅನೇಕ ಗಣ್ಯರು ಭಾಗಿ
ಹೊಸದಿಲ್ಲಿ, ಅ.18: ಶ್ವೇತಭವನದಲ್ಲಿ ದೀಪಾವಳಿ ಹಬ್ಬವನ್ನಾಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜ್ಞಾನ, ವೈದ್ಯಕೀಯ, ಉದ್ಯಮ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಇಂಡೋ ಅಮೆರಿಕನ್ನರು ಸಲ್ಲಿಸಿದ ಕೊಡುಗೆಯನ್ನು ಪ್ರಶಂಸಿಸಿದರು.
ನಿಕ್ಕಿ ಹ್ಯಾಲೆ, ಸೀಮಾ ವರ್ಮಾ, ಯುಎಸ್ ಫೆಡರಲ್ ಕಮ್ಯುನಿಕೇಶನ್ಸ್ ಕಮಿಷನ್ ನ ಚೇರ್ ಮೆನ್ ಅಜಿತ್ ಪೈ, ರಾಜ್ ಶಾ ಸೇರಿದಂತೆ ಅನೇಕ ಇಂಡೋ ಅಮೆರಿಕನ್ ಗಣ್ಯರು ಟ್ರಂಪ್ ಜೊತೆಗೂಡಿದರು.
“ದೀಪಾವಳಿ ಆಚರಿಸುವ ಸಂದರ್ಭ ನಾವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ನಿರ್ಮಿಸಿದ ಭಾರತೀಯ ಜನತೆಯನ್ನು ನೆನೆಯುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
Next Story