ಚುನಾವಣಾ ಪ್ರಚಾರಕ್ಕೆ ಮರಳಿದ ಒಬಾಮ
ವಾಶಿಂಗ್ಟನ್, ಅ. 19: ಶ್ವೇತಭವನದಿಂದ ಹೊರಹೋದ ಬಳಿಕ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಗುರುವಾರ ಪ್ರಚಾರ ಕಣಕ್ಕೆ ಮರಳಿದ್ದಾರೆ.
ವರ್ಜೀನಿಯ ಮತ್ತು ನ್ಯೂಜರ್ಸಿ ರಾಜ್ಯಗಳ ಗವರ್ನರ್ಗಳ ಹುದ್ದೆಗೆ ಸ್ಪರ್ಧೆಯಲ್ಲಿರುವ ಡೆಮಾಕ್ರಟಿಕ್ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ನಡೆಸಲಿದ್ದಾರೆ.
ನವೆಂಬರ್ 7ರಂದು ನಡೆಯಲಿರುವ ಚುನಾವಣೆಯು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದ ಮನೋಸ್ಥಿತಿಗೆ ಕನ್ನಡಿ ಹಿಡಿಯುವ ಸಾಧ್ಯತೆಯಿದೆ.
Next Story