ಬೆಂಗಳೂರು : ಮೂರು ವರ್ಷದ ಮಗುವಿನ ಅನುಮಾನಾಸ್ಪದ ಮೃತ್ಯು
ಬೆಂಗಳೂರು, ಅ.23: ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಪನಹಳ್ಳಿಯ ವೀರಸಾಗರ ರಸ್ತೆಯ ನಿವಾಸಿ ರತ್ನ ಹಾಗೂ ರವಿ ಎಂಬುವರ ಪುತ್ರಿ ಶಶಿ (3) ಸಾವನ್ನಪ್ಪಿರುವ ಮಗು ಎಂದು ತಿಳಿದುಬಂದಿದೆ.
ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಈ ದಂಪತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದು, ಯಲಹಂಕದಲ್ಲಿ ವಾಸವಿದ್ದರು. ರವಿವಾರ ತಾಯಿ ರತ್ನ ಹೊರಗೆ ಹೋಗಿದ್ದು, ಮಗು ಮಲಗಿತ್ತು. ಈ ವೇಳೆ ರವಿಯೂ ಮನೆಯಲ್ಲಿಯೇ ಇದ್ದರು. ಈ ನಡುವೆ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಮಗುವಿನ ಮೃತ ದೇಹವನ್ನು ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಉಪನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story