ಬೆಂಗಳೂರು: ಪಿಎಚ್ಡಿ ಪದವಿ ಪ್ರದಾನ
ಬೆಂಗಳೂರು, ಫೆ.12: ಬೆಂಗಳೂರು ವಿಶ್ವದ್ಯಾಲಯ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಡಿ.ರವಿಕುಮಾರ್ ಸಲ್ಲಿಸಿರುವ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ.
ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪಿ.ಕೇಶವ ನಾರಾಯಣ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿವಿ ಪಿಎಚ್ಡಿ ಪದವಿ ನೀಡಿದೆ. ಇದೇ ವಿವಿಯ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಂ.ಎಲ್.ಶಿಲ್ಪಾಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿದೆ.
ಬೆಂಗಳೂರು ವಿವಿಯ ಜೀವತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಫಜಿಲತ್ ಉಜ್ಮಾ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿವಿಯು ಪಿಎಚ್ಡಿ ಪದವಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story