ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸಾಗಾಟ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ: 1ಲಕ್ಷ ರೂ.ಮಂಜೂರು
ಬೆಂಗಳೂರು, ಫೆ. 19: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಗೆಸಾಗಾಟ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆ ಅಳವಡಿಸಲು ಜಿಲ್ಲಾ ಉಪ ನಿರ್ದೇಶಕರಿಗೆ 1ಲಕ್ಷ ರೂ.ಮಂಜೂರು ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪ್ರಶ್ನೆ ಪತ್ರಿಕೆ ವಿತರಕರ ತಂಡಗಳು ಬಳಸುವ ವಾಹನಗಳು ಇತರೆ ಇಲಾಖೆಯ ರಕಾರ ವಾಹನಗಳಾಗಿದ್ದಲ್ಲಿ ಜಿಪಿಎಲ್ ಟ್ರಾಕಿಂಗ್ ವ್ಯವಸ್ಥೆಯನ್ನು ಕ್ರಮಕ್ಕೆ ಪಡೆದು ಅಳವಡಿಸಲು ಸೂಚಿಸಲಾಗಿದೆ. ತಾತ್ಕಾಲಿಕವಾಗಿ ಬಳಸುವ ಬಾಡಿಗೆ ವಾಹನಗಳಿದ್ದರೆ ಪರೀಕ್ಷಾ ಅವಧಿಯ ಬಳಕೆಗಾಗಿ ಬಾಡಿಗೆ ಆಧಾರದಲ್ಲಿ ಅಳವಡಿಸಿ ಸೇವೆ ಪಡೆಯತಕ್ಕದ್ದು ಎಂದು ಸೂಚಿಸಲಾಗಿದೆ.
Next Story