ಜೆಡಿಯು ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ
ಬೆಂಗಳೂರು, ಏ.22: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿದ್ದು, 2ನೇ ಪಟ್ಟಿಯಲ್ಲಿ 12 ಅಭ್ಯರ್ಥಿಗಳನ್ನು ಘೋಷಿಸಿದೆ.
ರವಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ, ಪಟೇಲ್ ಬಿಡುಗಡೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷದ 15 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ 12 ಜನ ಅಭ್ಯರ್ಥಿಗಳಿದ್ದು ಒಟ್ಟು 27 ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏ.24 ಕೊನೆಯ ದಿನವಾಗಿರುವುದರಿಂದ 3ನೇ ಪಟ್ಟಿಯನ್ನು ಬಿಡುಗಡೆ ಮಾಡಲು ಚಿಂತನೆ ನಡಸಲಾಗಿದೆ. ರಾಜ್ಯಾದ್ಯಂತ ಒಟ್ಟು 30 ರಿಂದ 32 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಅಭ್ಯರ್ಥಿಗಳ ವಿವರ: ಡಾ.ಪದ್ಮ ಪ್ರಕಾಶ್- ಮಹಾಲಕ್ಷ್ಮಿಪುರಂ, ಡಿ.ಎಮ್.ಭತ್ತದ್-ಬಸವನಗುಡಿ, ವೆಂಕನಗೌಡ ಆರ್. ಗೋವಿಂದಗೌಡರ್- ನರಗುಂದ, ಶರಣ ಬಸಯ್ಯ ಹಿರೇಮಠ-ರಾಯಚೂರು, ವಿಜಯ್ ಕುಮಾರ್ ಎನ್-ವಿಜಯನಗರ, ಡಾ. ಎನ್.ನಿತ್ಯಾನಂದ-ಟಿ.ದಾಸರಹಳ್ಳಿ, ಬಸವರಾಜ ಎಸ್.ದೇಸಾಯಿ-ರೋಣ, ಅಬ್ದುಲ್ ಮಜೀದ್-ಪುತ್ತೂರು, ವೀರಪ್ಪ ದೇವರು ಆರ್.ಎಸ್-ತುಮಕೂರು ನಗರ, ಶೀನಿವಾಸ್ ಎನ್-ಮಹಾದೇವಪುರ, ಜಾವೀದ್ ಅಹಮದ್ ಬೆಳಗಾಂವ್ಕರ್ - ಹುಬ್ಬಳ್ಳಿ, ಧಾರವಾಡ(ದಕ್ಷಿಣ).