ಬೆಂಗಳೂರು: ಬೈಕ್ ಮೇಲೆ ಲಾರಿ ಉರುಳಿ ವ್ಯಾಪಾರಿ ಮೃತ್ಯು
ಬೆಂಗಳೂರು, ಜೂ.14: ಬೃಹತ್ ಗಾತ್ರದ ಕಂಟೈನರ್ ಲಾರಿ ಪಲ್ಟಿಯಾಗಿ ರಸ್ತೆ ಬದಿ ಸಾಗುತ್ತಿದ್ದ ಬೈಕ್ ಮೇಲೆ ಬಿದ್ದ ಪರಿಣಾಮ ವ್ಯಾಪಾರಿಯೊಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೋಲಿಗೆರೆ ಬಳಿ ನಡೆದಿದೆ.
ಚಿಕ್ಕಬೆಳವಂಗಲ ಗ್ರಾಮದ ವಿಜಯ್ ಕುಮಾರ್(40) ಮೃತಪಟ್ಟ ವ್ಯಾಪಾರಿ ಎಂದು ಗುರುತಿಸಲಾಗಿದೆ.
ಗುರುವಾರ ದಾಬಸ್ಪೇಟೆ ಮಾರ್ಗದಿಂದ ದೊಡ್ಡಬಳ್ಳಾಪುರದ ಕಡೆಗೆ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಕಂಟೈನರ್ ಲಾರಿ ಕೋಲಿಗೆರೆ ಗೇಟ್ ಬಳಿ ರಸ್ತೆಯ ಗುಂಡಿ ತಪ್ಪಿಸಲು ಹೋಗಿ, ನಿಯತ್ರಣ ತಪ್ಪಿರಸ್ತೆ ಮಧ್ಯೆ ಉರುಳಿಬಿದ್ದಿದೆ.
ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕ್ ಮೇಲೆಯೇ ಲಾರಿ ಉರುಳಿಬಿದ್ದಿದೆ. ಪರಿಣಾಮ ಬೈಕ್ ಸವಾರ ವಿಜಯ್ ಕುಮಾರ್ ಲಾರಿಯಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Next Story