ಗಾಂಜಾ ಮಾರಾಟಕ್ಕೆ ಮುಂದಾದ ನಾಲ್ವರ ಬಂಧನ: 8.6 ಕೆಜಿ ಗಾಂಜಾ ವಶ
ಬೆಂಗಳೂರು, ಜು.19: ಮಾದಕ ವಸ್ತು ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ 8.6 ಕೆಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಇಲ್ಲಿನ ಬೊಮ್ಮನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋವಿಂದಪುರದ ಜನಾರ್ಧನ್(33), ಚೇತನ್ಶರ್ಮ(46), ಬಿಸಂಬರ್ ಮಂಡಲ್(34), ಧನೇಶ್ವರ್ ಬೆಹರಾ(46) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬಿಸಂಬರ್ ಮಂಡಲ್, ಇದೇ ಪ್ರವೃತ್ತಿಯನ್ನು ಹೊಂದಿದ್ದ. ಅಷ್ಟೇ ಅಲ್ಲದೆ, ಈತನ ವಿರುದ್ಧ ಈ ಮೊದಲು ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story