ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಆ. 9: ‘ಆರ್ಯ ಈಡಿಗ ಜನಾಂಗ’ಕ್ಕೆ ಸೇರಿದ ಬಿಪಿಎಲ್ ಕಾರ್ಡ್ ಹೊಂದಿರುವ ಅತಿಸಣ್ಣ ರೈತ ಕುಟುಂಬಗಳ ಮಕ್ಕಳಿಗೆ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ, ಪದವಿ ಪೂರ್ವ, ಐಟಿಐ, ಡಿಪ್ಲೊಮಾ, ಪದವಿ, ಸಾತಕೋತ್ತರ ಪದವಿ, ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಹೊಸದಾಗಿ ಅರ್ಜಿ ಸಲ್ಲಿಸುವವರು ಮೊದಲನೆ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಕಳೆದ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪಡೆದವರು ಈ ಸಾಲಿನಲ್ಲಿ ಹೆಚ್ಚು ಅಂಕ ಹೊಂದಿರಬೇಕು ಎಂದು ಕೋರಲಾಗಿದೆ.
ವಿಜಯಲಕ್ಷ್ಮಿ ಆರ್.ಎಲ್.ಜಾಲಪ್ಪ ಎಜುಕೇಷನ್ ಫೌಂಡೇಶನ್, ನಂ.126, ಸಿಲ್ವರ್ ಸ್ಥಾರ್ ಹೊಟೇಲ್, ಕೆಳಮಹಡಿ, ಆರನೆ ಅಡ್ಡರಸ್ತೆ, ಗಾಂಧಿನಗರ, ಬೆಂಗಳೂರು-09 ಅಥವಾ ಮೊಬೈಲ್-99003 55995, ವೆಬ್ಸೈಟ್ www.jalappaedufoundation.org ಮೂಲಕ ಸೂಕ್ತ ದಾಖಲೆಗಳೊಂದಿಗೆ ಸೆಪ್ಟಂಬರ್ 15ರೊಳಗೆ ಅರ್ಜಿ ಸಲ್ಲಿಸಬಹುದು.
Next Story