ಬೆಂಗಳೂರು: ಅಪರಿಚಿತ ಆಟೊ ಚಾಲಕ ಮೃತ್ಯು
ಬೆಂಗಳೂರು, ಆ.13: ಅಪರಿಚಿತ ಆಟೊ ಚಾಲಕರೊಬ್ಬರು ಸಾವನ್ನಪ್ಪಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಟಿಸಿ ಪಾಳ್ಯದ ಮಾರಗೊಂಡನಹಳ್ಳಿ ರಸ್ತೆಯ ಮುಂಭಾಗ ಇರುವ ಕಟ್ಟಡವೊಂದರ ಬಳಿ ಮೃತಪಟ್ಟಿದ್ದು, ಸುಮಾರು 40 ವರ್ಷ ವಯಸ್ಸಿನ ಇವರು ಆಟೊ ಚಾಲಕ ಧರಿಸುವ ಸಮವಸ್ತ್ರ ಧರಿಸಿದ್ದಾರೆ. ಸಾರ್ವಜನಿಕರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮದ್ಯ ಸೇವನೆಯಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೃತದೇಹವನ್ನು ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story