ಬೆಂಗಳೂರು: ರೈಲಿಗೆ ಸಿಕ್ಕಿ ವೃದ್ಧ ಸಾವು
ಬೆಂಗಳೂರು, ಆ.16: ರೈಲು ಬರುತ್ತಿರುವುದನ್ನು ಗಮನಿಸದೆ ಹಳಿ ದಾಟುತ್ತಿದ್ದ ವೃದ್ಧರೊಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 60ರಿಂದ 65 ವರ್ಷದವರಂತೆ ಕಾಣುವ ಇವರು, ಬಿಳಿ -ನೀಲಿ ಬಣ್ಣದ ಚೌಕುಳಿ ಜುಬ್ಬ ಹಾಗೂ ಬಿಳಿ ಪಂಚೆ ಧರಿಸಿದ್ದಾರೆ. ನಗರದ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ದೇವನಗುಂದಿ ರೈಲ್ವೆ ನಿಲ್ದಾಣದ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ವಾರಸುದಾರರು ಕೂಡಲೇ ಕಂಟೋನ್ಮೆಂಟ್ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ
Next Story