ವಿದ್ಯಾರ್ಥಿ ವೇತನಕ್ಕಾಗಿ ಬ್ಯಾಂಕ್ ಮಾಹಿತಿ ಹಾಗೂ ಆಧಾರ್ ಸಂಖ್ಯೆ ಸ್ವೀಕಾರ
ಬೆಂಗಳೂರು, ಆ.18: ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸದ ಕಾರಣ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ನೀಡುವ ಎಂಎಚ್ಆರ್ಡಿ ವಿದ್ಯಾರ್ಥಿ ವೇತನದಿಂದ ರಾಜ್ಯದ ಒಟ್ಟು 1,605 ವಿದ್ಯಾರ್ಥಿಗಳ ಬ್ಯಾಂಕ್ ರಿಜೆಕ್ಷನ್ ಆಗಿದ್ದು, ಸದರಿ ವಿದ್ಯಾರ್ಥಿಗಳಿಂದ ಪುನಃ ಬ್ಯಾಂಕ್ ಮಾಹಿತಿ ಮತ್ತು ಆಧಾರ್ ಸಂಖ್ಯೆಯನ್ನು ಸ್ವೀಕರಿಸಲಾಗುತ್ತಿದೆ.
ಬ್ಯಾಂಕ್ ಮಾಹಿತಿ ಹಾಗೂ ಆಧಾರ್ ಸಂಖ್ಯೆ ನೀಡಿದವರು ಮಾತ್ರ ವಿದ್ಯಾರ್ಥಿ ವೇತನವನ್ನು ಪಡೆಯಲಿದ್ದಾರೆ. ಅದರಂತೆ 2011, 2012 ಮತ್ತು 2015 ಬ್ಯಾಚ್ಗಳ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದು ದಾಖಲು ಮಾಡಲಾಗಿದೆ. ಉಳಿದ ಬ್ಯಾಚುಗಳಾದ 2013, 2014 ಮತ್ತು 2016ರ ಮಾಹಿತಿ ಜಾರಿಲ್ಲಿದೆ ಎಂದು ಎಂಎಚ್ಆರ್ಡಿ ಸ್ಕಾಲರ್ಶಿಪ್ನ ನೋಡಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆೆ.
Next Story