ಯುವಕ ಕಾಣೆ: ಪತ್ತೆಗೆ ಮನವಿ
ಬೆಂಗಳೂರು, ಆ.23: ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಂಗಸ್ವಾಮಿ (20) ಕಾಣೆಯಾಗಿದ್ದು, ಪತ್ತೆಯಾದಲ್ಲಿ ಇಲ್ಲಿನ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ: ರಂಗಸ್ವಾಮಿ 20 ವರ್ಷ, ತೆಳ್ಳನೆಯ ಮೈಕಟ್ಟು, ಕಪ್ಪು ಮೈಬಣ್ಣ, ಗುಂಡು ಮುಖ, 5 ಅಡಿ ಎತ್ತರ, ಬಲತೋಳಿನಲ್ಲಿ ಹಚ್ಚೆ ಗುರುತು ಇರುತ್ತದೆ. ಕತ್ತಿನಲ್ಲಿ ತಾಯತ ಕಟ್ಟಿರುತ್ತಾರೆ. ಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಪುಲ್ ಓವರ್ ಧರಿಸಿರುತ್ತಾರೆ ಎಂದು ಪೊಲೀಸ್ ಸನ್ಇನ್ಸ್ಪೆಕ್ಟರ್, ತಲಘಟ್ಟಪುರ ಪೊಲೀಸ್ ಠಾಣೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story