ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಕ್ಕೆ ಉತ್ಪಾದಕರ ವಿರೋಧ
ಬೆಂಗಳೂರು, ಸೆ.2: ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿರುವ ಸರಕಾರದ ಕ್ರಮವನ್ನು ಪ್ಲಾಸ್ಟಿಕ್ ಉತ್ಪಾದಕರು ವಿರೋಧಿಸಿದ್ದಾರೆ. ನಾಗರೀಕರು ಉಪಯೋಗಿಸುವ ಕೆಲ ವಸ್ತುಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ಲಾಸ್ಟಿಕ್ ಮೇಲೆ ನೂರಾರು ಉದ್ದಿಮೆಗಳು ಅವಲಂಬಿತವಾಗಿವೆ. ಸಿದ್ಧ ಉಡುಪು, ಪ್ಯಾಕಿಂಗ್ ಸೇರಿದಂತೆ ಎಲ್ಲ ಉದ್ದಿಮೆಗಳಿಗೂ ಪ್ಲಾಸ್ಟಿಕ್ ಬೇಕಿದೆ. ಆದರೆ ಸರಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಪ್ಲಾಸ್ಟಿಕ್ ನಿಷೇಧದ ಹೆಸರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಉದ್ಯಮದ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲವೊಂದು ಉತ್ಪನ್ನಗಳಿಗೆ ವಿನಾಯಿತಿ ಸಿಕ್ಕಿದ್ದರೂ, ಎಲ್ಲ ಬಗೆಯ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ ಎಂದು ಅಂಗಡಿಗಳ ಬಾಗಿಲು ಹಾಕಿಸುತ್ತಿದ್ದಾರೆ ಎಂದು ರಾಜ್ಯ ಪ್ಲಾಸ್ಟಿಕ್ ಸಂಘದ ಅಧ್ಯಕ್ಷ ವಿ.ವಿಜಯಕುವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Next Story