ಬೆಂಗಳೂರು ವಿ.ವಿ- ಐಜಿಎನ್ಸಿಎ ಹೊಸ ಒಪ್ಪಂದಕ್ಕೆ ಸಹಿ
ಬೆಂಗಳೂರು, ಸೆ.9: ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸಂಶೋಧನೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಉನ್ನತಿ ಸಾಧಿಸಲು ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ(ಐಜಿಎನ್ಸಿಎ)ದೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ.
ಬೋಧನಾ ಸಂಶೋಧನೆ, ಸಹಯೋಗದಲ್ಲಿ ಸಂಶೋಧನಾ ಯೋಜನೆ, ವಿದ್ಯಾರ್ಥಿ ಪ್ರಾಯೋಜಿತ ಯೋಜನೆ, ಡಿಜಿಟಲ್ ಸೋರ್ಸ್ಗಳ ಅಭಿವೃದ್ಧಿ ಸೇರಿದಂತೆ ಏಳೆಂಟು ವಿಷಯಗಳ ಸಂಬಂಧ ಬೆಂವಿವಿ ಮತ್ತು ಐಜಿಎನ್ಸಿಎ ಒಪ್ಪಂದ ಮಾಡಿಕೊಂಡಿವೆ. ಬೆಂವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಮತ್ತು ಐಜಿಎನ್ಸಿಎ ಸದಸ್ಯ ಕಾರ್ಯದರ್ಶಿ ಡಾ.ಸಚ್ಚಿದಾನಂದ ಜೋಷಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಬೆಂವಿವಿ ಕುಲಸಚಿವ ಡಾ.ಬಿ.ಕೆ.ರವಿ ಉಪಸ್ಥಿತರಿದ್ದರು.
Next Story