ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಸೆರೆ
ಬೆಂಗಳೂರು, ಸೆ.14: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಕಾಂಗೋ ದೇಶದ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 40 ಸಾವಿರ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಕೆನ್(30) ಬಂಧಿತ ಕಾಂಗೋ ಪ್ರಜೆಯಾಗಿದ್ದು, ಈತನಿಂದ ಒಂದು ಕೆಜಿ ತೂಕದ ಗಾಂಜಾ, ಮೊಬೈಲ್, 500 ರೂ. ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಇಲ್ಲಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Next Story