ಬೆಂಗಳೂರು: 3ನೆ ರಾಷ್ಟ್ರೀಯ ವೇಗದ ಹಾಕಿ ಚಾಂಪಿಯನ್ಷಿಪ್ಗೆ ಸೆ.18 ರಂದು ಚಾಲನೆ
ಬೆಂಗಳೂರು, ಸೆ. 17: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 3ನೆ ರಾಷ್ಟ್ರೀಯ ಚಾಂಪಿಯನ್ಷಿಪ್ ವೇಗದ ಹಾಕಿ ಆಟ ಸೆ.18 ರಂದು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಮೈದಾನದಲ್ಲಿ ನಡೆಯಲಿದೆ ಎಂದು ಹಾಕಿ ಕರ್ನಾಟಕ ತಿಳಿಸಿದೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹಾಕಿ ಕರ್ನಾಟಕದ ಅಧ್ಯಕ್ಷ ಸುಬ್ರಮಣ್ಯ ಗುಪ್ತ ಮಾತನಾಡಿ, ಒಂದು ಹಾಕಿ ತಂಡದಲ್ಲಿ ಐದು ಆಟಗಾರರನ್ನೊಳಗೊಂಡ ರಾಷ್ಟ್ರೀಯ ಚಾಂಪಿಯನ್ಷಿಪ್ನ ಎರಡು ಆವೃತ್ತಿಗಳ ಯಶಸ್ವಿನ ನಂತರ, 3ನೆ ಆವೃತ್ತಿಯನ್ನು ಕರ್ನಾಟಕದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ವೇಗದ ಹಾಕಿ ಆಟ ಮೈದಾನವು ಸಾಮಾನ್ಯ ಆಟದ ಮೈದಾನಕ್ಕಿಂತ ಚಿಕ್ಕದಾಗಿರುತ್ತದೆ. ಹಾಗೂ ಪ್ರತಿ ತಂಡದಲ್ಲಿ 9 ಆಟಗಾರರಿದ್ದು, 5 ಆಟಗಾರರು ಮಾತ್ರ ಮೈದಾನಕ್ಕೆ ಇಳಿಯುತ್ತಾರೆ. ಮಿಕ್ಕ 4ಆಟಗಾರರು ಹೆಚ್ಚುವರಿಯಾಗಿ ಇರುತ್ತಾರೆ ಎಂದು ಮಾಹಿತಿ ನೀಡಿದರು.
Next Story