ಬಟ್ಟೆ, ಚಪ್ಪಲಿಯಲ್ಲಿ ಚಿನ್ನ ಸಾಗಾಟ: ಆರು ಜನರ ಬಂಧನ
ಬೆಂಗಳೂರು, ಸೆ.19: ಬಟ್ಟೆ ಮತ್ತು ಚಪ್ಪಲಿಯಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದಡಿ ಆರು ಜನರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಶಂಶೀರ್ ಅಲಿ, ಸಿ.ಸಲಾನ್, ಫಾರಿಸ್, ವಿನೋದ್ ಕುಮಾರ್ ಜೈನ್, ಪಿಂಟೋ ಕುಮಾರ್, ಮೊಹಿಯುದ್ದಿನ್ ಕುಂಜು, ಮುಹಮ್ಮದ್ ಶಫೀ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ದುಬೈನಿಂದ ಗೋವಾ ಮಾರ್ಗವಾಗಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಆರೋಪಿಗಳನ್ನು ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಚಪ್ಪಲಿಯಲ್ಲಿ 41.34 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಪತ್ತೆಯಾಗಿದೆ. ಸದ್ಯ ಎಲ್ಲ ಆರೋಪಿಗಳಿಂದ ಸುಮಾರು 69.75 ಲಕ್ಷ ಬೆಲೆ ಬಾಳುವ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
Next Story