ವೇಶ್ಯಾವಾಟಿಕೆ ದಂಧೆ: ನಾಲ್ವರ ಬಂಧನ
ಬೆಂಗಳೂರು, ಸೆ.25: ವಿದೇಶಿ ಮಹಿಳೆಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಜಯಮಹಲ್ನ ಅನುಪ್ ರಾಘವನ್, ಸೂರಜ್ ಬಿಸ್ವಾಸ್, ತಪಸ್ಕುಮಾರ್, ಪ್ರವಾಸ್ ಬಿಸ್ವಾಸ್ ಬಂಧಿತರಾಗಿದ್ದು, ಉಜ್ಬೇಕಿಸ್ತಾನದ ಇಬ್ಬರು, ಹೊರ ರಾಜ್ಯದ ಇಬ್ಬರು ಸೇರಿ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಜಯಮಹಲ್ ಮುಖ್ಯರಸ್ತೆಯ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ವಿದೇಶಿ ಮಹಿಳೆಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಮತ್ತಿಬ್ಬರ ಸೆರೆ: ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಹೆಬ್ಬಾಳದ ತನುಷ್ (24), ರಮಣಯ್ಯ (45) ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 20 ಸಾವಿರ ನಗದು, 3 ಮೊಬೈಲ್ಗಳನ್ನು ವಶಪಡಿಸಿಕೊಂಡು ಓರ್ವ ಯುವತಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story