ಬಿಎಂಟಿಸಿ ಬಸ್ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: 9.30ಲಕ್ಷ ರೂ.ದಂಡ ವಸೂಲಿ
ಬೆಂಗಳೂರು, ಸೆ. 28: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ಸುಗಳನ್ನು ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಒಟ್ಟು 6193 ಮಂದಿ ಪ್ರಯಾಣಿಕರಿಂದ ಒಟ್ಟು 9,30,580 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆಗಸ್ಟ್ ತಿಂಗಳಲ್ಲಿ ಸಂಸ್ಥೆಯ 23 ಸಾವಿರ ಟ್ರಿಪ್ಗಳನ್ನು ತನಿಖಾ ತಂಡ ತಪಾಸಣೆ ನಡೆಸಿದ್ದು, ಮೇಲ್ಕಂಡ ದಂಡ ವಸೂಲಿ ಮಾಡಿದೆ. ಅಲ್ಲದೆ, ಆದಾಯ ಸೋರಿಕೆ ತಡೆಗಟ್ಟಲು ಸಂಸ್ಥೆ ನಿರ್ವಾಹಕರ ಮೇಲೆ 2740 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಪುರುಷರಿಂದ ದಂಡ ವಸೂಲಿ: ಮಹಿಳೆಯರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 457 ಪುರುಷರಿಂದ ಒಟ್ಟು 45,700 ರೂ.ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆ ವಾಹನಗಳಲ್ಲಿ ಅಧಿಕೃತ ಟಿಕೆಟ್ ಹಾಗೂ ಪಾಸ್ ಪಡೆದು ಪ್ರಯಾಣಿಸಲು ಸಂಸ್ಥೆ ಪ್ರಕಟಣೆ ತಿಳಿಸಿದೆ.
Next Story