ಬೀಗ ಮುರಿದು ವೆಲ್ಡಿಂಗ್ ಯಂತ್ರ ಕಳವು
ಬೆಂಗಳೂರು, ಅ.9: ವೆಲ್ಡಿಂಗ್ ಶಾಪ್ನ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮೂರು ವೆಲ್ಡಿಂಗ್ ಯಂತ್ರ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿರುವ ಘಟನೆ ಇಲ್ಲಿನ ಎಲೆಕ್ಟ್ರಾನಿಕ್ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್ಸಿಟಿಯ ಮೈಲಸಂದ್ರ ಮುಖ್ಯರಸ್ತೆಯಲ್ಲಿರುವ ವೆಲ್ಡಿಂಗ್ಶಾಪ್ನ ಬೀಗ ಮುರಿದು ಮೂರು ವೆಲ್ಡಿಂಗ್ ಯಂತ್ರ, ಕಾಫರ್ಶೀಟ್, ವೈಯರ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಈ ಬಗ್ಗೆ ಅಂಗಡಿ ಮಾಲಕ ರವಿ ಎಂಬುವರು ನಗರದ ಎಲೆಕ್ಟ್ರಾನಿಕ್ಸಿಟಿ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ತನಿಖೆ ಕೈಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story