ಸ್ಯಾಂಡಲ್ ವುಡ್ ನಟನ ವಿರುದ್ಧ ಹಲ್ಲೆ ಆರೋಪ
ಬೆಂಗಳೂರು, ಅ.14: ಕನ್ನಡ ಸಿನೆಮಾ ನಟ ರಿಷಿ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು, ಇಲ್ಲಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.
ರಿಷಿ ಚಿಕ್ಕಮ್ಮ ಶಾಲಿನಿ ಗೋಪಿನಾಥ್ ಎಂಬವರು, ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ನಟ ರಿಷಿ, ತಂದೆ ನಾಗರಾಜ್, ತಾಯಿ ಅನಲಾ ಎಂಬವರ ಮೇಲೆ ದೂರು ನೀಡಿದ್ದಾರೆ.
ನಟ ರಿಷಿ ಕುಟುಂಬಸ್ಥರು ಬಸವೇಶ್ವರ ನಗರದಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಅ.10ರಂದು ಶಾಲಿನಿ ಬಸವೇಶ್ವರದ ನಗರದ ಮನೆಗೆ ಬಂದಿದ್ದರು. ಈ ವೇಳೆ ಆಕೆಯನ್ನು ಮನೆಯೊಳಗೆ ಬಿಡದೆ ರಿಷಿ ಕುಟುಂಬಸ್ಥರು ಛಾಪ ಕಾಗದ ಮೇಲೆ ಸಹಿ ಹಾಕಿದಾಗ ಮಾತ್ರ ಮನೆ ಒಳಗೆ ಪ್ರವೇಶ ಎಂದು ಹೆದರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಶಾಲಿನಿ ಜೋರಾಗಿ ಕೂಗಿಕೊಂಡಾಗ ರಿಷಿ ಮಚ್ಚಿನಿಂದ ಹೆದರಿಸಿ ಖಾಲಿ ಪತ್ರಕ್ಕೆ ಸಹಿ ಮಾಡುವಂತೆ ಬೆದರಿಸಿರುವುದಾಗಿ ಶಾಲಿನಿ ಅವರು ದೂರಿನ ಪತ್ರದಲ್ಲಿ ಉಲ್ಲೇಖ ಮಾಡಿರುವುದಾಗಿ ತಿಳಿದುಬಂದಿದೆ.
Next Story