ಬೆಂಗಳೂರು: ಸಿಲಿಂಡರ್ ಸ್ಫೋಟ; ತಾಯಿ-ಮಗ ಗಂಭೀರ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.19: ನಗರದಲ್ಲಿ ಮತ್ತೆ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಬೊಮ್ಮನಹಳ್ಳಿಯ ನಾಡಮ್ಮ ಲೇಔಟ್ ಬಳಿ ನಡದಿದೆ.
ಸಕಲೇಶಪುರದ ನಿವಾಸಿಗಳಾದ ಪುಪ್ಪವತಿ (32), ಪುತ್ರ ಸುವನ್ (9) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಕಲೇಶಪುರದಿಂದ ಹಬ್ಬಕ್ಕೆಂದು ಬೆಂಗಳೂರಿನ ಅಣ್ಣನ ಮನೆಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಹಬ್ಬಕ್ಕೆ ಹೂವು ತರಲೆಂದು ಪುಷ್ಪವತಿ ಅಣ್ಣ ಹೊರಗಡೆ ಹೋಗಿದ್ದರು. ಈ ವೇಳೆ ಸಿಲಿಂಡರ್ ಸೋರಿಕೆಯಿಂದ ಮನೆಯೊಳಗೆ ದಿಢೀರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಸಹ ಕುಸಿದು ಬಿದ್ದಿದೆ. ತಾಯಿ ಹಾಗೂ ಮಗನಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
Next Story