ರವಿ ಶ್ರೀವತ್ಸ ವಿರುದ್ಧ 'ಮೀ ಟೂ' ಆರೋಪ: ಬಹಿರಂಗ ಕ್ಷಮೆ ಕೋರಿದ ನಟಿ ಸಂಜನಾ
ನಟಿ ಸಂಜನಾ- ರವಿ ಶ್ರೀವತ್ಸ
ಬೆಂಗಳೂರು, ನ.13: ಗಂಡ ಹೆಂಡತಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಚಿತ್ರದ ನಿರ್ದೇಶಕ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು 'ಮೀ ಟೂ' ಅಭಿಯಾನದಲ್ಲಿ ಆರೋಪಿಸಿದ್ದ ನಟಿ ಸಂಜನಾ ಬಹಿರಂಗ ಕ್ಷಮೆ ಕೋರಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾರ ಮನಸ್ಸನ್ನೂ ನೋಯಿಸುವ ಸಲುವಾಗಿ ಅರೋಪ ಮಾಡಿಲ್ಲ. ಚಿತ್ರೀಕರಣದ ವೇಳೆ ನಡೆದ ಘಟನೆಗಳನ್ನು ವಿವರಿಸಿದ್ದೇನಷ್ಟೆ. ಆದಾಗ್ಯೂ ಸಿನೆಮಾ ನಿರ್ದೇಶಕ ರವಿ ಶ್ರೀವತ್ಸರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆಂದು ತಿಳಿಸಿದರು.
ನಟಿ ಸಂಜನಾ 'ಮೀ ಟೂ' ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ನ.8ರೊಳಗೆ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಬಳಿ ಕ್ಷಮೆ ಕೇಳಬೇಕೆಂದು ಸಿನೆಮಾ ನಿರ್ದೇಶಕರ ಸಂಘ ಗಡವು ನೀಡಿತ್ತು. ಹೀಗಾಗಿ ಕಲಾವಿದರ ಸಂಘದ ಅಧ್ಯಕ್ಷ ಹಿರಿಯ ನಟ ಅಂಬರೀಶ್ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಟಿ ಸಂಜನಾ ಗಲ್ರಾನಿ ಕ್ಷಮೆ ಕೇಳಿದ್ದಾರೆ.
Next Story