ಇಂದಿರಾ ಕ್ಯಾಂಟೀನ್ನಲ್ಲಿ ಶೀಘ್ರವೇ ಟೀ, ಕಾಫಿ ವ್ಯವಸ್ಥೆ: ಡಾ.ಜಿ. ಪರಮೇಶ್ವರ್
ಬೆಂಗಳೂರು-, ನ.16: ಇಂದಿರಾ ಕ್ಯಾಂಟೀನ್ನಲ್ಲಿ ಕಾಫಿ, ಟೀ ನೀಡಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು,
ಸದ್ಯ ಇಂದಿರಾ ಕ್ಯಾಂಟೀನ್ನಲ್ಲಿ ತಿಂಡಿ, ಊಟ ನೀಡಲಾಗುತ್ತಿದೆ. ಮುಂದಕ್ಕೆ ಟೀ, ಕಾಫಿ ನೀಡಬೇಕೆಂಬ ಬೇಡಿಕೆ ಬಂದಿದೆ. ಅಂತೆಯೇ ಎಲ್ಲ ಕ್ಯಾಂಟೀನ್ನಲ್ಲೂ ಶೀಘ್ರವೇ ಇದನ್ನು ಪ್ರಾರಂಭಿಸಲಾಗುವುದು. ಇನ್ನು ಇದಕ್ಕೆ ದರ ನಿಗದಿ ಮಾಡಿಲ್ಲ ಎಂದರು.
Next Story