ಕ್ಲಬ್ಗಳ ಮೇಲೆ ಸಿಸಿಬಿ ದಾಳಿ: 53 ಜನರ ಬಂಧನ
ಬೆಂಗಳೂರು, ನ.20: ನಗರದ ಪೀಣ್ಯ ವ್ಯಾಪ್ತಿಯಲ್ಲಿರುವ ಎರಡು ಕ್ಲಬ್ ಗಳ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು, 53 ಮಂದಿಯನ್ನು ಬಂಧಿಸಿ 99,740 ರೂ. ವಶಪಡಿಸಿಕೊಂಡಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶದ 1ನೆ ಹಂತದಲ್ಲಿರುವ ಲಕ್ಷ್ಮೀ ರಿಕ್ರಿಷಿಯೇಷನ್ ಅಸೋಸಿಯೇಷನ್ ಕ್ಲಬ್ ಹಾಗೂ ರಂಗನಾಥಸ್ವಾಮಿ ರಿಕ್ರಿಷಿಯೇಷನ್ ಅಸೋಸಿಯೇಷನ್ ಕ್ಲಬ್ ನಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಎರಡು ಕ್ಲಬ್ಗಳ ಮೇಲೆ ದಾಳಿ ಮಾಡಿ 53 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 99,740ರೂ. ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪ್ರಕಟನೆ ತಿಳಿಸಿದೆ.
Next Story