ರೈತರಿಗೆ 3 ಫೇಸ್ ವಿದ್ಯುತ್ ನೀಡಲು ನಿರ್ಧಾರ
ಬೆಂಗಳೂರು, ನ.26: ರೈತರಿಗೆ ಹಗಲಿನಲ್ಲಿಯೇ 3ಫೇಸ್ ವಿದ್ಯುತ್ ನೀಡಲು ಸರಕಾರ ನಿರ್ಧರಿಸಿದ್ದು, ಪ್ರಾಯೋಗಿಕವಾಗಿ ಮೂರು ಎಸ್ಕಾಂಗಳಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದೆ.
ರಾತ್ರಿ ವೇಳೆ 4ಗಂಟೆ, ಹಗಲಿನ ವೇಳೆ 3ಗಂಟೆ ಮಾತ್ರವೇ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಹಗಲಿನ ವೇಳೆ ವಿದ್ಯುತ್ ಸರಬರಾಜಿಗೆ ರೈತರಿಂದ ಬೇಡಿಕೆಯಿತ್ತು. ವಿದ್ಯುತ್ ಉತ್ಪಾದನೆ ಕೊರತೆ ಹಿನ್ನೆಲೆಯಲ್ಲಿ ಕಡಿಮೆ ಬೇಡಿಕೆ ಇದ್ದ ರಾತ್ರಿ ಹೊತ್ತು, ಅಧಿಕ ವಿದ್ಯುತ್ ನೀಡುತ್ತಿತ್ತು. ವಿದ್ಯುತ್ ಸಮಸ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಸೆಸ್ಕಾಂ, ಬೆಸ್ಕಾಂ ಹಾಗೂ ಹೆಸ್ಕಾಂನಲ್ಲಿ ರೈತರಿಗೆ ಹಗಲಿನಲ್ಲಿಯೇ 3ಫೇಸ್ ವಿದ್ಯುತ್ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.
Next Story